Home > ಸಾಧನೆಗಳು

ಶತದಿನ ಪೂರ್ಣಗೊಳಿಸಿದ ಸರ್ಕಾರ
ಜನತಾ ಜನಾರ್ಧನನಿಗೆ ಪ್ರಗತಿ ವರದಿ ಮಂಡನೆ

ಮಾನ್ಯ ಮುಖ್ಯಮಂತ್ರಿಯವರ ಭಾಷಣ

ದಿನಾಂಕಃ ೯.೯.೨೦೦೮                                              ಸ್ಥಳಃ
ಸಮಯಃ ಬೆಳಿಗ್ಗೆ ೧೦.೩೦ಕ್ಕೆ                        ಬಾಂಕ್ವೆಟ್ ಹಾಲ್, ವಿಧಾನಸೌಧ
ಸಚಿವ ಸಹೋದ್ಯೋಗಿಗಳೆ,

ಸರ್ಕಾರದ ಮುಖ್ಯ ಕಾರ್ಯದರ್ಶಿಗಳೆ, ಹಿರಿಯ ಅಧಿಕಾರಿಗಳೆ, ಮಹನೀಯರೆ ಮತ್ತು ಮಹಿಳೆಯರೆ,

Shri Yedyurappa, Chief Minister with Shri Ananth Kumar and Shri Sadananda Gowda

Shri Yedyurappa, Chief Minister with Shri Ananth Kumar and Shri Sadananda Gowda

  • ಜನರ ಆಶೀರ್ವಾದದಿಂದ ಸಮೃದ್ಧ ಕರ್ನಾಟಕ ನಿರ್ಮಿಸುವ ಸಂಕಲ್ಪ ತೊಟ್ಟು ೨೦೦೮ರ ಮೇ ೩೦ ರಂದು ಅಧಿಕಾರದ ಚುಕ್ಕಾಣ ಹಿಡಿದ ನಮ್ಮ ಸರ್ಕಾರ ಯಶಸ್ವಿ ೧೦೦ ದಿನಗಳನ್ನು ಪೂರ್ಣಗೊಳಿಸಿದೆ.
  • ಆಡಳಿತ ವಹಿಸಿಕೊಂಡ ಪ್ರಾರಂಭದಲ್ಲಿ ಈ ನಾಡಿನ ಜನತೆಗೆ ನಾವು ಪ್ರತಿ ನೂರು ದಿನಗಳಿಗೊಮ್ಮೆ ಪ್ರಗತಿ ಕುರಿತ ವರದಿ ಮಂಡಿಸುವುದಾಗಿ ವಚನ ನೀಡಿದ್ದೆವು.
  • ನೂರು ದಿನಗಳನ್ನು ಪೂರ್ಣಗೊಳಿಸಿದ ಈ ಸಂಭ್ರಮದ ಸನ್ನಿವೇಶದಲ್ಲಿ ಈ ರಾಜ್ಯದ ಮುಖ್ಯಮಂತ್ರಿ ಸ್ಥಾನದಲ್ಲಿ ನಿಂತು ಜನತಾ ಜನಾರ್ಧನನ ಮುಂದೆ ಪ್ರಗತಿ ವರದಿಯನ್ನು ಅತ್ಯಂತ ಸಂತೋಷದಿಂದ ಮಂಡಿಸುತ್ತಿದ್ದೇನೆ.
  • ಪ್ರಣಾಳಿಕೆ ಆಶಯರೂಪದ್ದು. ಮುಂಗಡ ಪತ್ರ ಅದರ ಕ್ರಿಯಾರೂಪ. ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳಿಗೆ ಮುಂಗಡ ಪತ್ರದಲ್ಲಿ ಖಚಿತ ಕಾರ್ಯಕ್ರಮದ ಸ್ವರೂಪ ನೀಡಲಾಗಿದೆ.
  • ಸುಭದ್ರ ಸರ್ಕಾರ ಮತ್ತು ಸಮರ್ಥ ಆಡಳಿತ ಪ್ರಜಾತಂತ್ರ ವ್ಯವಸ್ಥೆಯ ಎರಡು ಕಣ್ಣುಗಳಿದ್ದ ಹಾಗೆ. ಈ ಎರಡೂ ಕಣ್ಣುಗಳನ್ನು ಆರೋಗ್ಯವಾಗಿರಿಸಿಕೊಳ್ಳುವುದು ನಮ್ಮ ಗುರಿ.
  • ಚುನಾಯಿತ ಸರ್ಕಾರದ ಪೂರ್ಣಾವಧಿ ಐದು ವರ್ಷ. ಚುನಾವಣಾ ಪ್ರಣಾಳಿಕೆಯ ಕ್ರಿಯಾ ಅವಧಿ ಕೂಡಾ ಐದು ವರ್ಷ.
  • ಆದರೆ ನಾಳೆ ಆಗುವುದು ಇಂದೇ ಆಗಲಿ – ಇಂದು ಆಗುವುದು ಈಗಲೇ ಆಗಲಿ ಎನ್ನುವುದು ನಮ್ಮ ಅಭಿಮತ. ಅಭಿವೃದ್ಧಿ ಆಡಳಿತ ಮಂತ್ರ.
  • ನಾವು ಅವಸರದಲ್ಲಿದ್ದೇವೆ. ಯೋಜನೆಗಳ ಫಲ ಜನರಿಗೆ ತಡವಾಗದೆ ಮತ್ತು ತಡೆಯಿಲ್ಲದೆ ತಲುಪಬೇಕು ಎಂಬುದು ನಮ್ಮ ಆಶಯ.
  • ಚುನಾವಣಾ ಪ್ರಣಾಳಿಕೆಯ ಶೇ.೯೦ಕ್ಕೂ ಹೆಚ್ಚು ಆಶಯಗಳನ್ನು ಸ್ಪಷ್ಟ ಕಾರ್ಯಕ್ರಮದ ರೂಪದಲ್ಲಿ ಮುಂಗಡ ಪತ್ರದಲ್ಲಿ ಅಳವಡಿಸಲು ನಾವು ಯಶಸ್ವಿಯಾಗಿದ್ದೇವೆ.
  • ಹಾಗೆಯೇ ಮುಂಗಡ ಪತ್ರ ಒಳಗೊಂಡಿರುವ ಕಾರ್ಯಕ್ರಮಗಳಲ್ಲಿ ಶೇ.೯೦ಕ್ಕೂ ಹೆಚ್ಚು ಸರ್ಕಾರಿ ಆದೇಶಗಳಾಗಿ ಅನುಷ್ಠಾನದ ಹಂತದಲ್ಲಿವೆ. ಇದು ನನಗೆ ನೆಮ್ಮದಿ ತಂದಿದೆ.
  • ನಮ್ಮ ಜನಕಲ್ಯಾಣ ಯೋಜನೆಗಳ ಫಲಾನುಭವಿಗಳು ನಿಮ್ಮ ಮುಂದೆ ವೇದಿಕೆಯಲ್ಲಿದ್ದಾರೆ. ಅವರಿಗೆ ಸವಲತ್ತುಗಳನ್ನು ವಿತರಿಸಲಾಗಿದೆ. ಪ್ರತಿ ಜಿಲ್ಲೆಯಲ್ಲಿ ಈ ಕಾರ್ಯಕ್ರಮ ಇಂದು ನಡೆದಿದೆ.
  • ವಿವಿಧ ಯೋಜನೆಗಳಡಿ ರಾಜ್ಯದಾದ್ಯಂತ ಒಂದು ಕೋಟಿಗೂ ಹೆಚ್ಚು ಕುಟುಂಬಗಳಿಗೆ ನೇರ ಪ್ರಯೋಜನ ದೊರೆಯುತ್ತಿದ್ದು ಇಲ್ಲಿ ವೇದಿಕೆಯಲ್ಲಿರುವವರು ಸಾಂಕೇತಿಕವಾಗಿ ಅವರನ್ನು ಪ್ರತಿನಿಧಿಸುತ್ತಾರೆ.
  • ಸರ್ಕಾರ ಅಧಿಕಾರದ ಚುಕ್ಕಾಣ ಹಿಡಿದದ್ದು ಮೇ ೩೦ ರಂದು. ನಮ್ಮ ಬಜೆಟ್ ಮಂಡನೆಯಾದದ್ದು ಜುಲೈ ೧೭ ರಂದು.  ಬಜೆಟ್‌ಗೆ ಅನುಮೋದನೆ ದೊರೆತದ್ದು ಜುಲೈ ೩೧ ರಂದು.
  • ಅಂದರೆ ಸರ್ಕಾರ ಅಸ್ತಿತ್ವಕ್ಕೆ ಬಂದ ಈ ನೂರು ದಿನಗಳ ಅವಧಿಯಲ್ಲಿ ಬಜೆಟ್‌ಗೆ ಅನುಮೋದನೆ ದೊರೆತು ಯೋಜನೆಗಳ ಅನುಷ್ಠಾನ ಪ್ರಾರಭವಾಗಿ ಇಂದಿಗೆ ಕೇವಲ ೪೦ ದಿನಗಳು ಮಾತ್ರ ಆಗಿವೆ.
  • ಈ ೪೦ ದಿನಗಳ ಅವಧಿಯಲ್ಲಿ ಯುದ್ಧದೋಪಾದಿಯಲ್ಲಿ ಯೋಜನೆಗಳ ಅನುಷ್ಠಾನ ಕೈಗೊಳ್ಳಲಾಗಿದೆ.
  • ಬೆಳಕಿಲ್ಲದ ದಾರಿಯಲ್ಲಿ ನಡೆಯಬಹದು – ಆದರೆ ಕನಸಿಲ್ಲದ ದಾರಿಯಲ್ಲಿ ನಡೆಯುವುದಾದರೂ ಹೇಗೆ? ಇದು ಕವಿಯ ಪ್ರಶ್ನೆ. ಕನಸುಗಳಿದ್ದರೆ ಬೆಳಕಿಲ್ಲದ ದಾರಿಯಲ್ಲೂ ನಡೆಯಬಹುದು ಎಂಬುದು ನನ್ನ ದೃಢ ನಂಬಿಕೆ.
  • ಕಳೆದ ನೂರು ದಿನಗಳಲ್ಲಿ ಎದುರಾದ ಸವಾಲುಗಳನ್ನು ಮೆಟ್ಟಿ ಪ್ರಗತಿಯ ಹಾದಿಯಲ್ಲಿ ದೃಢ ಹೆಜ್ಜೆಗಳನ್ನು ನಾವು ಇರಿಸಿದ್ದೇವೆ.

ಸಿಂಹಾವಲೋಕನ

  • ನುಡಿದಂತೆ ನಡೆದ ನಮ್ಮ ಸರ್ಕಾರದ ಸಾಧನೆಯ ಸಿಂಹಾವಲೋಕನ ಹೀಗಿದೆಃ
  • ವಿಧಾನ ಸೌಧದ ಮುಂಭಾಗದ ಮೆಟ್ಟಿಲುಗಳ ಮೇಲೆ ಅನ್ನದಾತನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭದಲ್ಲಿ ನನ್ನ ಮನಸ್ಸನ್ನು ಆವರಿಸಿದ್ದುದು ಈ ನಾಡಿನ ರೈತನ ಚಿತ್ರ.
  • ಅನ್ನದಾತನ ಸಂಕಷ್ಟಗಳಿಗೆ ಸ್ಪಂದಿಸುವ ಮತ್ತು ಸಮಸಗಳಿಗೆ ಪರಿಹಾರ ರೂಪಿಸುವ ಪ್ರಾಮಾಣಕ ಪ್ರಯತ್ನವನ್ನು ಮುಂಗಡ ಪತ್ರದಲ್ಲಿ ನಾನು ಮಾಡಿದ್ದೇನೆ. ಅದರ ಪರಿಣಾಮ ನಿಮ್ಮ ಮುಂದಿದೆ.
  • ೧೦ ಹೆಚ್‌ಪಿ ವರೆಗಿನ ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಮತ್ತು ಇದಕ್ಕಾಗಿ ವಾರ್ಷಿಕ ೨,೦೩೦ ಕೋಟಿ ರೂ.ಗೂ ಹೆಚ್ಚು ಸಹಾಯ ಧನ ನೀಡುವ ಕಾರ್ಯಕ್ರಮ ಸಾಮಾನ್ಯದ್ದಲ್ಲ. ಆಗಸ್ಟ್ ೧ ರಿಂದ ಈ ಕಾರ್ಯಕ್ರಮ ಜಾರಿಗೆ ಬಂದಿದೆ.

ರಾಜಕೀಯ ಇಚ್ಛಾಶಕ್ತಿಃ

  • ರಾಜಕೀಯ ಇಚ್ಛಾಶಕ್ತಿ ಮತ್ತು ಪ್ರಶ್ನಾತೀತ ಬದ್ಧತೆಯಿಂದಾಗಿ ಇದು ಸಾಧ್ಯವಾಗಿದೆ.
  • ದೇಶದಲ್ಲಿ ಮೊದಲ ಬಾರಿಗೆ ಒಣಭೂಮಿ ಕೃಷಿ ನಿರತ ರೈತರ ಹಿತಚಿಂತನೆ ಮಾಡಿದ ಯಾವುದಾದರೂ ಸರ್ಕಾರವಿದ್ದರೆ ಅದು ಕರ್ನಾಟಕದ ಬಿಜೆಪಿ ಸರ್ಕಾರವಾಗಿದೆ. ಈ ಮಾತನ್ನು ಹೇಳುವಾಗ ಒಬ್ಬ ರೈತನ ಮಗನಾಗಿ ನನಗೆ ಹೆಮ್ಮೆಯೆನಿಸುತ್ತದೆ.
  • ಶೇ.೩ರ ಬಡ್ಡಿ ದರದಲ್ಲಿ ಸಾಲ, ಸಮಗ್ರ ಕೃಷಿ ಅಭಿವೃದ್ಧಿಗೆ ಕೃಷಿ ಮಿಷನ್ ರಚನೆ, ಸಾವಯವ ಕೃಷಿಗೆ ವಿಶೇಷ ಪ್ರೋತ್ಸಾಹ – ರೈತ ಮತ್ತು ಕೃಷಿ ಅಭಿವೃದ್ಧಿಗೆ ಹಿಂದೆಂದು ನೀಡದಷ್ಟು ಗಮನಹರಿಸಲಾಗಿದೆ.
  • ಅನುಷ್ಠಾನದಲ್ಲಿರುವ ನೀರಾವರಿ ಯೋಜನೆಗಳ ಕಾಮಗಾರಿಗಳನ್ನು ಪೂರ್ಣಗೊಳಿಸಲು ಆದ್ಯತೆಯಿತ್ತಿರುವ ನಮ್ಮ ಸರ್ಕಾರ ಹೊಸ ಯೋಜನೆಗಳಿಗೆ ಕೂಡಾ ಗಮನ ಹರಿಸಿದ. ಉದಾಹರಣೆಗೆ ೩,೩೮೮ ಕೋಟಿ ರೂ. ಅಂದಾಜು ವೆಚ್ಚದ ಬsದ್ರಾ ಮೇಲ್ದಂಡೆ ಯೋಜನೆಗೆ ಆಡಳಿತಾತ್ಮಕ ಮಂಜೂರಾತಿ ನೀಡಲಾಗಿದೆ.
  • ಹಾಗೆಯೇ ದೀರ್ಘಕಾಲದಿಂದ ನೆನೆಗುದಿಗೆ ಬಿದ್ದಿದ್ದ ಸೊರಬ ತಾಲ್ಲೂಕಿನ ದಂಡಾವತಿ ಯೋಜನೆಗೆ ಚಾಲನೆ ನೀಡಲಾಗುತ್ತಿದೆ.

ಸಾಮಾಜಿಕ ಕಾಳಜಿಃ

  • ಈ ಸರ್ಕಾರದ ಸಾಮಾಜಿಕ ಕಾಳಜಿ ಸಂಶಯಾತೀತವಾದುದು. ಪರಿಶಿಷ್ಠರು, ಹಿಂದುಳಿದವರು, ಅಲ್ಪ ಸಂಖ್ಯಾತರು ಮತ್ತು ಮಹಿಳೆಯರ ಕಲ್ಯಾಣ ಕಾರ್ಯಕ್ರಮಗಳಿಗೆ ದಾಖಲೆಯ ಬಜೆಟ್ ಅನುದಾನ ನೀಡಿದ ಹೆಗ್ಗಳಿಕೆ ನಮ್ಮದು.
  • ಭಾಗ್ಯಲಕ್ಷ್ಮಿ ಯೋಜನೆಯ ಆರಂಭಿಕ ಠೇವಣಯನ್ನು ದ್ವಿಗುಣಗೊಳಿಸಿ ಅಂತಿಮ ಪಾವತಿ ಮೊತ್ತವನ್ನು ಒಂದು ಲಕ್ಷ ರೂ.ಗಳಿಗೆ ಹೆಚ್ಚಿಸುವ ನಮ್ಮ ಸರ್ಕಾರದ ನಿರ್ಧಾರದ ಹಿಂದೆ ಸಾಮಾಜಿಕ ಕಳಕಳಿಯಿದೆ.
  • ಸಂಧ್ಯಾ ಸುರಕ್ಷಾ ಯೋಜನೆಯಡಿ ಹಿರಿಯ ನಾಗರೀಕರಿಗೆ ಮಾಸಿಕ ೪೦೦ ರೂ. ಪಿಂಚಣ, ಶೇ. ೭೫ಕ್ಕೂ ಹೆಚ್ಚು ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳಿಗೆ ತಿಂಗಳಿಗೆ ಒಂದು ಸಾವಿರ ರೂ. ಮಾಸಾಶನ ನೀಡುವ ಮೂಲಕ ಅವರು ಸ್ವಾವಲಂಬಿಗಳಾಗುವ ಅವಕಾಶ ಕಲ್ಪಿಸಲಾಗುತ್ತಿದೆ.
  • ಪರಿಶಿಷ್ಠರು ಮತ್ತು ಹಿಂದುಳಿದ ವರ್ಗದ ವಿದ್ಯಾರ್ಥಿಗಳ ಭೋಜನ ವೆಚ್ಚವನ್ನು ೪೫೦ ರೂ.ಗಳಿಂದ ೬೫೦ ರೂ.ಗಳಿಗೆ ಹೆಚ್ಚಿಸಲಾಗಿದೆ.
  • ಹಾಗೆಯೇ ಗ್ರಾಮೀಣ ಆಶ್ರಯ ಯೋಜನೆಯಡಿ ಮನೆ ನಿರ್ಮಾಣದ ಘಟಕ ವೆಚ್ಚವನ್ನು ೩೦ ಸಾವಿರ ರೂ.ಗಳಿಂದ ೪೦ ಸಾವಿರ ರೂ.ಗಳಿಗೆ ಹೆಚ್ಚಿಸಲಾಗಿದೆ.

ಶಿಕ್ಷಣಃ

  • ವ್ಯಕ್ತಿಯ ವಿಕಸನ, ಸಾಮಾಜಿಕ ಹಾಗೂ ಆರ್ಥಿಕ ವಿಕಾಸದ ಹಾದಿಯಲ್ಲಿ ಶಿಕ್ಷಣದ ಪಾತ್ರ ಮಹತ್ವದ್ದು. ಇದನ್ನು ಅರಿತಿರುವ ನಮ್ಮ ಸರ್ಕಾರ ಶಿಕ್ಷಣ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ಪ್ರಧಾನ ಗಮನ ನೀಡಿದೆ.
  • ಎಂಟನೆ ತರಗತಿಯಲ್ಲಿ ಓದುತ್ತಿರುವ ಏಳು ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಉಚಿತ ಬೈಸಿಕಲ್, ಪ್ರಾಥಮಿಕ ಶಾಲಾ ಶಿಕ್ಷಕರಿಗೆ ನೂತನ ವೇತನ ಶ್ರೇಣ ಜಾರಿ, ಉನ್ನತ ವ್ಯಾಸಂಗ ಕೈಗೊಳ್ಳುವ ವಿದ್ಯಾರ್ಥಿಗಳಿಗೆ ಶೇ.೬ರ ಬಡ್ಡಿ ದರದಲ್ಲಿ ೫ ಲಕ್ಷ ರೂ.ಗಳವರೆಗೆ ಸಾಲ, ಜ್ಞಾನ ಸಂಪತ್ತಿನ ವೃದ್ಧಿ ಮತ್ತು ಉನ್ನತ ಸಂಶೋಧನೆಗೆ ಮಾರ್ಗದರ್ಶನ ನೀಡಲು ಡಾಃ ಕಸ್ತೂರಿ ರಂಗನ್ ಅವರ ಅದsಕ್ಷತೆಯಲ್ಲಿ ಕರ್ನಾಟಕ ಜ್ಞಾನ ಆಯೋಗ ರಚನೆ ಇತ್ಯಾದಿ ಪ್ರಯತ್ನಗಳು ಕರ್ನಾಟಕದ ಶೈಕ್ಷಣಕ ಕ್ಷೇತ್ರದ ಬಲವದsನೆಗೆ ನಾವು ಕೈಗೊಂಡಿರುವ ವಿಶೇಷ ಕ್ರಮಗಳಾಗಿವೆ.

ಆರೋಗ್ಯಃ

  • ಸರ್ಕಾರಿ ಆಸ್ಪತ್ರೆಗಳ ಸುಧಾರಣೆಗೆ ಹೆಚ್ಚು ಹಣ, ವೈದ್ಯಕೀಯ ಶಿಕ್ಷಣ ಪ್ರವೇಶದಲ್ಲಿ ಹೆಚ್ಚಳ, ಮಹಿಳೆಯರ ಆರೋಗ್ಯ ಸುಧಾರಣೆಗೆ ತಾಯಿ ಭಾಗ್ಯ, ತುರ್ತು ಚಿಕಿತ್ಸೆ ಸೇವೆ ಒದಗಿಸಲು ಆರೋಗ್ಯ ಕವಚ ಯೋಜನೆ ಇತ್ಯಾದಿ ಕಾರ್ಯಕ್ರಮಗಳು ಆರೋಗ್ಯ ವಲಯದ ಸುಧಾರಣೆಗೆ ನಮ್ಮ ಸರ್ಕಾರ ನೀಡಿರುವ ಪ್ರಾಶಸ್ತ್ಯದ ಸಂಕೇತವಾಗಿವೆ.

ಕುಡಿಯುವ ನೀರುಃ

  • ೧೨.೩೫ ಲಕ್ಷ ಜನರಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲು ಸರ್ಕಾರ ಮುಂದಾಗಿದೆ. ೨೫೦ ಕೋಟಿ ರೂ. ಮೊತ್ತದ ೩೨ ಬೃಹತ್ ಕುಡಿಯುವ ನೀರು ಯೋಜನೆಗಳಿಗೆ ಮಂಜೂರಾತಿ ನೀಡಲಾಗಿದೆ.
  • ಈ ವರ್ಷ ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಗೆ ೮೨೫ ಕೋಟಿ ರೂ. ಹಂಚಿಕೆ ಮಾಡಿದ್ದು ಈಗಾಗಲೇ ೩೫೦ ಕೋಟಿ ರೂ. ಬಿಡುಗಡೆ ಮಾಡಲಾಗಿದೆ.

ನಗರಾಭಿವೃದ್ಧಿಃ

  • ಬೆಂಗಳೂರು ನಗರದ ಮೂಲಬsತ ಸೌಲಬsಗಳ ಸಮಗ್ರಾಭಿವೃದ್ಧಿಗೆ ಅಬೈಡ್ ಅಸ್ತಿತ್ವಕ್ಕೆ ತರಲಾಗಿದೆ.
  • ನಗರದ ಮದsಭಾಗದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ರೇಸ್‌ಕೋರ್ಸ್‌ನ್ನು ಇನ್ನೊಂದು ವರ್ಷದಲ್ಲಿ ಹೊರ ವಲಯಕ್ಕೆ ಸ್ಥಳಾಂತರಿಸುವ ದಿಟ್ಟ ನಿರ್ಧಾರ ಕೈಗೊಳ್ಳಲಾಗಿದೆ.
  • ಬೆಂಗಳೂರು ನಗರದ ಮೂಲಬsತ ಅಗತ್ಯಗಳನ್ನು ಪೂರೈಸಲು ಈ ವರ್ಷ ೧,೮೮೦ ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗುತ್ತಿದೆ.
  • ಬೃಹತ್ ಬೆಂಗಳೂರು ಮಹಾನಗರ ವ್ಯಾಪ್ತಿಗೆ ಹೊಸದಾಗಿ ಸೇರಿರುವ ಪ್ರದೇಶಗಳಲ್ಲಿ ರಸ್ತೆ, ಒಳ ಚರಂಡಿ ವ್ಯವಸ್ಥೆ ಮತ್ತು ಕುಡಿಯುವ ನೀರು ಸರಬರಾಜಿಗೆ ಯೋಜನೆಗಳನ್ನು ರೂಪಿಸಲಾಗಿದೆ.
  • ನಮ್ಮ ಮೆಟ್ರೋ ಯೋಜನೆಗೆ ಈ ವರ್ಷ ೭೦೦ ಕೋಟಿ ರೂ.ಗಳನ್ನು ಹಂಚಿಕೆ ಮಾಡಿದ್ದು ಕಳೆದ ೧೦೦ ದಿನಗಳಲ್ಲಿ ೨೯೩ ಕೋಟಿ ರೂ.ಗಳಷ್ಟು ವೆಚ್ಚ ಮಾಡಲಾಗಿದೆ.
  • ಅಲ್ಲದೆ ಬೆಂಗಳೂರು ನಗರ ಹೊರತುಪಡಿಸಿ ಏಳು ಮಹಾನಗರಪಾಲಿಕೆಗಳಿಗೆ ತಲಾ ೫೦ ಕೋಟಿ ರೂ.ಗಳಂತೆ ೩೫೦ ಕೋಟಿ ರೂ. ಅಂದಾಜು ವೆಚ್ಚದ ಅಭಿವೃದ್ಧಿ ಯೋಜನೆಗೆ ಮಂಜೂರಾತಿ ನೀಡಿದ್ದು ಈಗಾಗಲೇ ೧೧೯ ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ.
  • ಮೂಲಬsತ ಸೌಲಬsಃ
  • ಮುಂದಿನ ನಾಲ್ಕು ವರ್ಷಗಳಲ್ಲಿ ಐದು ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲು ಯೋಜನೆಗಳನ್ನು ರೂಪಿಸಲಾಗಿದೆ.
  • ನಿನ್ನೆಯಷ್ಟೆ ಛತ್ತಿಸಘಡದ ಸರ್ಕಾರದೊಂದಿಗೆ ೨ ಸಾವಿರ ಮೆಗವ್ಯಾಟ್ ಸಾಮರ್ಥ್ಯದ ಥರ್ಮಲ್ ವಿದ್ಯುತ್ ಘಟಕದ ಸ್ಥಾಪನೆ ಸಂಬಂದs ಒಡಂಬಡಿಕೆಗೆ ಸಹಿ ಹಾಕಲಾಗಿದೆ.
  • ಕೋಲಾರ, ರಾಯಚೂರು ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ತಲಾ ೩ ಮೆ.ವ್ಯಾ. ಸಾಮರ್ಥ್ಯದ ಮೂರು ಸೌರಶಕ್ತಿ ಉತ್ಪಾದನಾ ಘಟಕಗಳಿಗೆ ಅನುಮೋದನೆ ನೀಡಲಾಗಿದೆ.
  • ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ವೈಮಾನಿಕ ಸಂಪರ್ಕ ಕಲ್ಪಿಸುವ ಮಹತ್ವಾಕಾಂಕ್ಷೆ ನಮ್ಮ ಸರ್ಕಾರದ್ದು.
  • ಗುಲ್ಬರ್ಗಾ ಮತ್ತು ಶಿವಮೊಗ್ಗ ವಿಮಾನ ನಿಲ್ದಾಣಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ.
  • ಬೀದರ್ ವಾಯುಪಡೆ ವಿಮಾನ ನಿಲ್ದಾಣದಲ್ಲಿ ಟರ್ಮಿನಲ್ ಕಟ್ಟಡ ನಿರ್ಮಾಣ ಹಾಗೂ ಇತರ ನಾಗರೀಕ ವಿಮಾನಯಾನ ಸೌಲಬs ಸೃಷ್ಠಿಸಲು ಜಿಲ್ಲಾಧಿಕಾರಿಗಳಿಗೆ ರಾಜ್ಯ ಸರ್ಕಾರ ಮೂರು ಕೋಟಿ ರೂ.ಗಳನ್ನು ಒದಗಿಸಿದೆ.
  • ರಾಯಚೂರು, ಬಾಗಲಕೋಟೆ, ದಾವಣಗೆರೆ ಮತ್ತು ಕೊಡಗಿನ ಕುಶಾಲನಗರಗಳಲ್ಲಿ ವಿಮಾನ ಇಳಿದಾಣ ನಿರ್ಮಿಸಲು ಮಂಜೂರಾತಿ ನೀಡಿದ್ದೇವೆ.
  • ಕಾರವಾರ, ಮಲ್ಪೆ ಮತ್ತು ಹೊನ್ನಾವರಗಳಲ್ಲಿ ಪಿಪಿಪಿ ಮಾಡೆಲ್‌ನಲ್ಲಿ ಬಂದರುಗಳನ್ನು ಅಭಿವೃದ್ಧಿಪಡಿಸಲು ಅನುಮೋದನೆ ನೀಡಲಾಗಿದೆ.
  • ಕೇವಲ ಮಂಜೂರಾತಿ ಮತ್ತು ಶಿಲಾನ್ಯಾಸಗಳಿಂದ ವೂತ್ರ ತೃಪ್ತಿಪಡುವುದು ನನ್ನ ಜಾಯಮಾನವಲ್ಲ. ಇವು ಕೇವಲ ಮೊದಲ ಹೆಜ್ಜೆ ಮಾತ್ರ.  ಯೋಜನೆಗಳ ಕಾಲಬದ್ಧ ಅನುಷ್ಠಾನ ಮತ್ತು ಪsಲಾನುಬsವಿಗಳಿಗೆ ಪ್ರಯೋಜನ ದೊರೆಯುವಂತೆ ಮಾಡುವುದು ನಮ್ಮ ಸರ್ಕಾರದ ಗುರಿಯಾಗಿದೆ.
  • ಮುಂದಿನ ನೂರು ದಿನಗಳಲ್ಲಿ ಶಿಲಾನ್ಯಾಸವಾದ ನಂತರ ಸಂಬಂಧಿಸಿದ ಯೋಜನೆಗಳಡಿ ಆಗಿರುವ ಪ್ರಗತಿ ಬಗ್ಗೆ ನಿಮಗೆ ವರದಿ ನೀಡಲಿದ್ದೇನೆ.
  • ಸಂಪನ್ಮೂಲ ಸಂಗ್ರಹಣೆಗೆ ಆದ್ಯತೆಃ
  • ಯೋಜಿತ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಸಂಪನ್ಮೂಲ ಒದಗಿಸಿಕೊಳ್ಳುವುದು ಮುಖ್ಯ. ಆದ್ದರಿಂದ ಸಂಪನ್ಮೂಲ ಸಂಗ್ರಹಣೆಗೆ ವಿಶೇಷ ಗಮನ ನೀಡಿದ್ದೇವೆ.
  • ಕಳೆದ ವರ್ಷ ಜೂನ್‌ನಿಂದ ಆಗಸ್ಟ್ ವರೆಗೆ ಒಟ್ಟು ೬,೦೧೨ ಕೋಟಿ ರೂ. ತೆರಿಗೆ ಸಂಗ್ರಹವಾಗಿದ್ದರೆ, ಈ ವರ್ಷ ಇದೇ ಅವಧಿಯಲ್ಲಿ ೬,೮೯೧ ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ.
  • ಕಳೆದ ವರ್ಷಕ್ಕೆ ಹೋಲಿಸಿದಾಗ ಈ ವರ್ಷ ಸುಮಾರು ಒಂದು ಸಾವಿರ ಕೋಟಿ ರೂ. ಹೆಚ್ಚುವರಿ ಸಂಪನ್ಮೂಲ ಸಂಗ್ರಹವಾಗಿದೆ.
  • ಆಡಳಿತಕ್ಕೆ ಕಾಯಕಲ್ಪಃ
  • ಜನರ ಆಶೋತ್ತರಗಳಿಗೆ ಆಡಳಿತ ಯಂತ್ರ ಹೆಚ್ಚು ಸ್ಪಂದಿಸುವಂತೆ ಮಾಡಲು ಹಲವು ಕ್ರಮಗಳನ್ನು ನಮ್ಮ ಸರ್ಕಾರ ಕೈಗೊಂಡಿದೆ.
  • ಅವುಗಳಲ್ಲಿ ಪ್ರತಿ ಶನಿವಾರ ಹೋಬಳಿ ಮಟ್ಟದಲ್ಲಿ ಜನಸ್ಪಂದನ ಸಭೆ ನಡೆಸಿ ಜನರ ಮನೆ ಬಾಗಿಲಿಗೆ ಸರ್ಕಾರವೇ ಹೋಗಿ ಅವರ ಅನಿಸಿಕೆಗಳನ್ನು ಆಲಿಸಿ ದೂರುಗಳನ್ನು ಸ್ವೀಕರಿಸಿ ಪರಿಹಾರ ಸೂಚಿಸುವ ವ್ಯವಸ್ಥೆ ಈ ತಿಂಗಳ ೨೦ರಿಂದ ಜಾರಿಗೆ ಬರಲಿದೆ.
  • ಖುದ್ದು ನಾನು ಮತ್ತು ನನ್ನ ಸಚಿವ ಸಂಪುಟದ ಸದಸ್ಯರುಗಳು ಕೂಡಾ ಹೋಬಳಿ ಮಟ್ಟದ ಸಭೆಗಳಲ್ಲಿ ಭಾಗವಹಿಸಲಿದ್ದೇವೆ. ಜನರ ದೂರು ಮತ್ತು ದುಮ್ಮಾನಗಳಿಗೆ ಸ್ಪಂದಿಸಲಿದ್ದೇವೆ.
  • ಪ್ರಜಾಪ್ರಬsತ್ವದಲ್ಲಿ ಪ್ರಜೆಯೇ ಪ್ರಬs. ಆದ್ದರಿಂದ ಪ್ರಜೆಗಳ ನ್ಯಾಯೋಚಿತ ಅಗತ್ಯಗಳಿಗೆ ಸ್ಪಂದಿಸುವುದು ಪ್ರಜಾ ಸೇವಕರಾದ ಚುನಾಯಿತ ಪ್ರತಿನಿಧಿಗಳ ಕರ್ತವ್ಯ ಎಂದು ನಾನು ಭಾವಿಸಿದ್ದೇನೆ.
  • ಸೆಪ್ಟಂಬರ್ ೨೦ ರಿಂದ ಅಧಿಕಾರಿಗಳು ನಿಮ್ಮ ಬಳಿ ಬರಲಿದ್ದಾರೆ. ನಿಮ್ಮ ದೂರುಗಳಿಗೆ ಸ್ಪಂದಿಸಲಿದ್ದಾರೆ.  ಮುಂದಿನ ನೂರು ದಿನಗಳ ಅವಧಿ ನಂತರ ಮತ್ತೆ ಸಭೆ ನಡೆಸಿ ವರದಿ ನೀಡಲಿದ್ದೇವೆ.
  • ಇದಲ್ಲದೆ ಪ್ರತಿ ಗುರುವಾರ ಸಚಿವ ಸಂಪುಟದ ಸಭೆಯ ನಂತರ ಮುಖ್ಯಮಂತ್ರಿಯಾದಿಯಾಗಿ ಎಲ್ಲಾ ಸಚಿವರು ವಿಧಾನ ಸೌದsದ ತಮ್ಮ ಕಚೇರಿಯಲ್ಲಿ ಕುಳಿತು ಕಡ್ಡಾಯ ಕಡತ ವಿಲೇವಾರಿ ಮಾಡುವಂತೆ ಸೂಚಿಸಲಾಗಿದೆ.
  • ಪ್ರತಿ ನೂರು ದಿನಗಳಿಗೆ ಜನತೆಗೆ ಪ್ರಗತಿ ಬಗ್ಗೆ ವರದಿ ನೀಡಲು ವ್ಯವಸ್ಥೆ ಮಾಡಲಾಗಿದೆ.
  • ಈಗಾಗಲೇ ೧೦ ಕಾರ್ಯಪಡೆಗಳನ್ನು ರಚಿಸಲಾಗಿದ್ದು ಅವುಗಳೂ ಕೂಡಾ ಕಾಲಬದ್ಧವಾಗಿ ಪರಿಶೀಲನೆ ಮತ್ತು ಸಭೆ ನಡೆಸಿ ಪ್ರತಿ ನೂರು ದಿನಗಳಿಗೆ ಒಮ್ಮೆ ಜನರಿಗೆ ವರದಿ ಒಪ್ಪಿಸಬೇಕಾಗುತ್ತದೆ.
  • ಉದಾಹರಣೆಗೆ ಬೆಂಗಳೂರು ಮೂಲ ಸೌಕರ್ಯಾಭಿವೃದ್ಧಿ ಸಂಬಂಧ ರಚಿಸಲಾಗಿರುವ ಕಾರ್ಯಪಡೆ ಅಬೈಡ್ಗೆ ಸ್ವತಃ ನಾನೇ ಅಧ್ಯಕ್ಷನಾಗಿದ್ದೇನೆ. ನಾಳೆಯೇ ಅಬೈಡ್‌ನ ಎರಡನೆ ಸಭೆ ನಡೆಯಲಿದೆ.
  • ಉಳಿದ ಕಾರ್ಯಪಡೆಗಳೂ ಕೂಡಾ ತಕ್ಷಣವೇ ಸಭೆ ನಡೆಸಿ ಮಧ್ಯಂತರ ವರದಿ ಸಲ್ಲಿಸುವಂತೆ ಸೂಚಿಸಲಾಗುವುದು.

ಬಂಧುಗಳೆ,

ಈವರೆಗಿನ ನೂರು ದಿನಗಳ ಅವಧಿಯಲ್ಲಿ ಆಗಿರುವ ಪ್ರಗತಿ ಕುರಿತ ವರದಿಯನ್ನು ಇಂದು ಸಲ್ಲಿಸಲಾಗಿದೆ.
ಮುಂದಿನ ನೂರು ದಿನಗಳ ಅವಧಿಯಲ್ಲಿ ಕೈಗೊಳ್ಳಬೇಕಾದ ಕಾರ್ಯಗಳ ಗುರಿಯನ್ನು ಕೂಡಾ ಈಗಾಗಲೇ ನಿಗದಿಪಡಿಸಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಆಡಳಿತ ಯಂತ್ರ ಹೆಚ್ಚು ಸ್ಪಂದನಶೀಲ ಮತ್ತು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಲು ಪೂರಕವಾದ ಎಲ್ಲಾ ಕ್ರಮಗಳನ್ನು ಸರ್ಕಾರ ಕೈಗೊಳ್ಳಲಿದೆ.
ಮುಕ್ತಾಯದ ಮಾತುಗಳುಃ
ರಾಜ್ಯದ ಬsವ್ಯ ಬsವಿಷ್ಯಕ್ಕೆ ಬುನಾದಿ ಸಿದ್ಧಗೊಂಡಿದೆ. ಬಹುತೇಕ ಕಾರ್ಯಕ್ರಮಗಳ ಅನುಷ್ಠಾನ ಪ್ರಾರಂಬsವಾಗಿದೆ.
ಸಮೃದ್ಧ ಕರ್ನಾಟಕ ನಿರ್ಮಿಸುವ ಸಂಕಲ್ಪ ಸಾಕಾರಗೊಳಿಸುವ ಹಾದಿಯಲ್ಲಿ ಸದಡsವಾದ ಹೆಜ್ಜೆಗಳನ್ನು ನನ್ನ ಸರ್ಕಾರ ಇರಿಸಿದೆ.
ನಿಮ್ಮೆಲ್ಲರ ಸಹಕಾರದಿಂದ ನಮ್ಮ ಸರ್ಕಾರ ಮುಂಬರುವ ದಿನಗಳಲ್ಲಿ ಮತ್ತಷ್ಟು ದೃಡs ಹೆಜ್ಜೆಗಳನ್ನು ಇರಿಸಲಿದೆ, ನಾಡಿನ ಜನರ ಆಶಯಗಳನ್ನು ನನಸು ಮಾಡಲಿದೆ ಎಂದು ಹೇಳಿ ನನ್ನ ಮಾತುಗಳನ್ನು ಮುಗಿಸುತ್ತೇನೆ.
ನಮಸ್ಕಾರ