ಭದ್ರ ಬುನಾದಿ ಮೇಲೆ ಅಭಿವೃದ್ಧಿ ಸೌಧ
ಸರ್ಕಾರಿ ವ್ಯವಸ್ಥೆಯ ಬಗ್ಗೆ ಸಾರ್ವಜನಿಕರಲ್ಲಿ ಆಶಾದಾಯಕ ಮನೊಭಾವ ಮೂಡಿಸಿ ರಾಜ್ಯದ ಸರ್ವಾಂಗೀಣ ಅಭಿವೃದ್ದಿಯನ್ನು ದ್ಯೇಯವಾಗಿಸಿಕೊಂಡು ಆಡಳಿತ ಚುಕ್ಕಾಣಿ ಹಿಡಿದ ಪ್ರಸ್ತುತ ಸರ್ಕಾರ ತನ್ನ ಗುರಿ ಸಾಧನೆಯತ್ತ ದೃಢಸಂಕಲ್ಪದೊಂದಿಗೆ ದಿಟ್ಟ ಹೆಜ್ಜೆ ಇಟ್ಟಿದೆ.
ಬಾಗ್ಯಲಕ್ಷ್ಮಿ, ಆರೋಗ್ಯ ಕವಚ, ಸ೦ಧ್ಯಾ ಸುರಕ್ಷಾ, ತಾಯಿ ಭಾಗ್ಯ, ಜನಸ್ಪಂದನದಂತಹ ವಿನೂತನ ಯೋಜನೆಗಳ ಮೂಲಕ ಬಡವರು, ಆಶಕ್ತರು, ಮಹಿಳೆಯರು, ಪರಿಶಿಷ್ಠರು, ಅಲ್ಪಸಂಖ್ಯಾತರು ಮತ್ತು ಹಿಂದುಳಿದವರಿಗೆ ಒತ್ತಾಸೆಯಾಗಿ ನಿಂತಿದೆ. ಆಡಳಿತದಲ್ಲಿ ೨೦೦ ದಿನಗಳನ್ನು ಪೂರೈಸಿರುವ ಸರ್ಕಾರ ಜನರಿಗೆ ನೀಡಿದ ಭರವಸೆಯಂತೆಯೆ ಇನ್ನೂರು ದಿನಗಳ ಪ್ರಗತಿ ವರದಿಯನ್ನು ತೆರೆದಿಟ್ಟಿದೆ.
ಕೃಷಿ
* ಸಂಪೂರ್ಣ ಒಣ ಬೇಸಾಯ ಆಶ್ರಿತ ೨೦ ಲಕ್ಷ ಸಣ್ಣ ಮತ್ತು ಅತಿಸಣ್ಣ ರೈತ ಕುಟುಂಬಗಳಿಗೆ ತಲಾ ರೂ.೧೦೦೦ ಸಹಾಯಧನ ವಿತರಣೆಗೆ ಚಾಲನೆ. ರೂ.೨೧೦ ಕೋಟಿ ಬಿಡುಗಡೆ.
* ಸಹಕಾರಿ ಸಂಸ್ಥೆಗಳಿಂದ ಶೇಕಡಾ ೩ರ ಬಡ್ಡಿದರದಲ್ಲಿ ೯ ಲಕ್ಷ ರೈತ ಸದಸ್ಯರಿಗೆ ರೂ.೨೭೭೩ ಕೋಟಿ ಕೃಷಿ ಸಾಲ ವಿತರಣೆ.
* ಕೃಷಿ ಮಿಷನ್ ರಚನೆ. ರೂ.೧೫ ಕೋಟಿ. ಅನುದಾನ ಮಂಜೂರು.
* ಕೃಷಿ ಯಾಂತ್ರಿಕರಣ ನೆರವು ಯೊಜನೆಯಡಿ ೧೨,೦೦೦ ರೈತರಿಗೆ ರೂ.೪೫ ಕೋಟಿ ನೆರವು.
* ಶ್ರಿ ಆನಂದ ಅದ್ಯಕ್ಷತೆಯಲ್ಲಿ ಸಾವಯಾವ ಕೃಷಿ ಮಿಷನ್ ಕಾರ್ಯರಂಭ. ೫೦,೦೦೦ ಸವಾಯವ ಕೃಷಿಕರ ನೋಂದಣಿ.
* ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಹಾಲಿಗೆ ರೂ.೨/- ಪ್ರೊತ್ಸಾಹ ಧನ ಯೋಜನೆ ಜಾರಿ. ಪ್ರತಿ ತಿಂಗಳು ರಾಜ್ಯದ ೫.೫ ಲಕ್ಷಕ್ಕೂ ಅಧಿಕ ಹಾಲು ಉತ್ಪಾದಕ ಕುಟುಂಬಗಳ ಮಹಿಳೆಯರಿಗೆ ನೇರವಾಗಿ ಈ ಹಣ ನೀಡಿಕೆ ರೂ.೬೫ ಕೋಟಿ ಬಿಡುಗಡೆ, ರೂ.೩೫ ಕೋಟಿ ವೆಚ್ಚ.
ಆರೋಗ್ಯ
* ಗ್ರಾಮೀಣ ಪ್ರದೇಶಗಳಲ್ಲಿ ತುರ್ತು ಆರೋಗ್ಯ ಸೇವೆಗಾಗಿ ೧೦೮ “ಆರೋಗ್ಯ ಕವಚ” ಯೋಜನೆ. ೬೬ ಸುಸಜ್ಜಿತ ಅಂಬುಲೆನ್ಸ್ ಸೇವೆ ಆರಂಭ, ೪.೭೬ ಲಕ್ಷ ಕರೆ ಸ್ವೀಕಾರ; ೪೮೦೦ ಚಿಕಿತ್ಸೆಗಳ ನೆರವೇರಿಕೆ.
* ಬೆಂಗಳೂರಿನ ಇಂದಿರಾನಗರದಲ್ಲಿ ಸಾರ್ವಜನಿಕ ಆಸ್ಪತ್ರೆ ಸ್ಥಾಪನೆಗೆ ಚಾಲನೆ.
* ಗುಲ್ಬರ್ಗ ಮತ್ತು ಚಮಾರಾಜನಗರ ಜಿಲ್ಲಾ ಆಸ್ಪತ್ರೆಗಳ ಕಟ್ಟಡ ನಿರ್ಮಾಣಕ್ಕೆ ಚಾಲನೆ.
* ಬೀದರ್, ಬೆಳಗಾವಿ, ರಾಯಚೂರು, ಶಿವಮೊಗ್ಗ, ಹಾಸನ ಮತ್ತು ಮಂಡ್ಯ ವೈದ್ಯಕಿಯ ವಿಜ್ನಾನ ಸಂಸ್ಥೆಗಳ ಕಟ್ಟಡ ಕಮಾಗಾರಿಗೆ ರೂ.೬೭ ಕೋಟಿ ಬಿಡುಗಡೆ.
* ವಿಕ್ಟೋರಿಯಾ ಮತ್ತು ಬೌರಿಂಗ್ ಆಸ್ಪತ್ರೆಗಳಲ್ಲಿ ಹೊಸದಾಗಿ “ಟ್ರೌಮಾಕೇರ್” ಸೆಂಟರ್” ಸ್ಥಾಪನೆ. ಕಟ್ಟಡ ಕಾಮಾಗಾರಿ ಮತ್ತು ಉಪಕರಣ ಖರೀದಿಗಾಗಿ ರೂ.೧೨ ಕೋಟಿ ಬಿಡುಗಡೆ .
* ಮಡಿಲು, ಪ್ರಸೂತಿ ಆರೈಕೆ, ಜನನಿ ಸುರಕ್ಷಾ ಯೋಜನೆ ಒಗ್ಗೂಡಿಸಿ ’ತಾಯಿಬಾಗ್ಯ’ ಯೋಜನೆ.
ಮೂಲಸೌಕರ್ಯ ಹಾಗೂ ಕೈಗಾರಿಕೆ
* ಮುಖ್ಯಮಂತ್ರಿಗಳ ಅದ್ಯಕ್ಷತೆಯಲ್ಲಿ “ಕೌಶಲ್ಯ ಅಭಿವೃದ್ದಿ ಆಯೋಗ” ರಚನೆ.
* ಕೈಗಾರಿಕಾ ಅಭಿವೃದ್ದಿಗಾಗಿ ಇನ್ಫೋಸಿಸ್ ವ್ಯವಸ್ಥಾಪಕ ನಿರ್ದೇಶಕ ಕ್ರಿಸ್ ಗೋಪಾಲಕೃಷ್ಣನ್ ಅಧ್ಯಕ್ಷತೆಯಲ್ಲಿ “ವಿಷನ್ ಗ್ರೂಪ್” ರಚನೆ.
* ರಾಜ್ಯದ ಉನ್ನತ ಮಟ್ಟದ ಸಮಿತಿಯಿಂದ ೩೦ ಬೃಹತ್ ಉದ್ದಿಮೆಗಳಿಗೆ ಅನುಮೋದನೆ. ರೂ.೩೦,೧೮೪ ಕೋಟಿ ಬಂಡವಾಳ ಹೂಡಿಕೆ ಅನುಮೋದನೆ. ೪ ಲಕ್ಷ ಉದ್ಯೋಗ ಸೃಷ್ಠಿ ನಿರೀಕ್ಷೆ.
* ಬೆಂಗಳೂರು, ಹುಬ್ಬಳ್ಳಿ ಮತ್ತು ಮೈಸೂರಿನಲ್ಲಿ ನಡೆದ ಉದ್ಯೋಗ ಮೇಳದಲ್ಲಿ ೧೦,೧೧೦ ಅಭ್ಯರ್ಥಿಗಳಿಗೆ ಉದ್ಯೋಗ.
* ಸುವರ್ಣ ವಸ್ತ್ರ ನೀತಿ ಜಾರಿ ರೂ.೨೫ ಕೋಟಿ ಕ್ರಿಯಾ ಯೋಜನೆ ಸಿದ್ಧ.
* ಪಿಪಿಪಿ ಮಾದರಿಯಲ್ಲಿ ವಿಜಾಪುರ ವಿಮಾನ ನಿಲ್ದಾಣ ಅಭಿವೃದ್ದಿಗೆ ಅಡಿಗಲ್ಲು.
* ರೂ.೩ ಕೋಟಿ ವೆಚ್ಚದ ಬೀದರ್ ವಿಮಾನ ನಿಲ್ದಾಣ ಟರ್ಮಿನಲ್ ಕಟ್ಟಡ ಸಿದ್ದ.
ಗ್ರಾಮೀಣಾಭಿವೃದ್ದಿ
* ಪ್ರಧಾನಮಂತ್ರಿ ಗ್ರಾಮಸಡಕ್ ಯೋಜನೆಯಡಿ ರೂ.೨೦೫ ಕೋಟಿ ವೆಚ್ಚದಲ್ಲಿ ೮೩೧ ಕೀ.ಮೀ. ರಸ್ತೆ ಅಭಿವೃದ್ಧಿಗೆ ಚಾಲನೆ. ಈ ಯೋಜನೆ ಅನುಷ್ಠಾನದಲ್ಲಿ ಕರ್ನಾಟಕ ದೇಶದಲ್ಲೇ ದ್ವಿತೀಯ ಹಾಗು ಗುಣಮಟ್ಟದಲ್ಲಿ ಪ್ರಥಮ ಸ್ಥಾನ .
* ಗ್ರಾಮಿಣ ಪ್ರದೇಶದ ೨,೫೫೩ ಜನ ವಸತಿ ಮತ್ತು ೨,೦೦೫ ಗ್ರಾಮೀಣ ಶಾಲೆಗಳಲ್ಲಿ ರೂ.೫೧೫ ಕೋಟಿ ವೆಚ್ಚದ್ದಲ್ಲಿ ಶುದ್ದ ಕುಡಿಯುವ ನೀರು.
* ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ೨೯.೫೨ ಲಕ್ಷ ಗ್ರಾಮೀಣ ಕುಟುಂಬಗಳಿಗೆ ಉದ್ಯೋಗ ಚೀಟಿ ಮತ್ತು ೪.೨೩ ಲಕ್ಷ ಕುಟುಂಬಗಳಿಗೆ ಉದ್ಯೋಗ.
* ಜಿಲ್ಲಾ ಪಂಚಾಯಿತಿಗಳಿಗೆ ಸುವರ್ಣ ಗ್ರಾಮೋದಯ ಯೋಜನೆಯಡಿ ರೂ.೨೪೨ ಕೋಟಿ ಅನುದಾನ ರೂ.೧೮೪ ಕೋಟಿ ವೆಚ್ಚ.
ವಿದ್ಯುತ್
* ಛತ್ತೀಸ್ ಗಢದಲ್ಲಿ ವಿದ್ಯುತ್ ಸ್ಥಾವರ ಸ್ಥಾಪನೆಗೆ ಚಾಲನೆ, ರಾಯಪುರದಲ್ಲಿ ಕೆ.ವಿ.ನಿ.ದ ಕಚೇರಿ ಆರಂಭ.೧೨೦೦ ಎಕರೆ ಭೂಸ್ವಾಧೀನ ಪ್ರಕ್ರಿಯೆ ಪ್ರಾರಂಭ.
* ವಿಜಾಪುರದಲ್ಲಿ ೪೦೦೦ ಮೆಗಾವ್ಯಾಟ್ ಮತ್ತು ಗುಲ್ಬರ್ಗಾದಲ್ಲಿ ೧೩೨೦ ಮೆ.ವಾ. ಥರ್ಮಲ್ ವಿದ್ಯುತ್ ಸ್ಥಾವರ ಸ್ಥಾಪನೆಗೆ ಮಂಜೂರಾತಿ.
* ವಿದ್ಯುತ್ ಕೊರತೆ ನೀಗಿಸಲು ಹೆಚ್ಚುವರಿ ವಿದ್ಯುತ್ ಖರೀದಿಗೆ ರೂ.೧೦೦ ಕೋಟಿ ಬಿಡುಗಡೆ.
* ೨೦೦೮ ರ ನವೆಂಬರ್ ನಿಂದ ೬ ಗಂಟೆ ತ್ರಿ ಫೇಸ್ ಮತ್ತು ಇನ್ನು ೬ ಗಂಟೆ ಸಿಂಗಲ್ ಫೇಸ್ ವಿದ್ಯುತ್ ವ್ಯವಸ್ಥೆ.
* “ನಿರಂತರ ಜ್ಯೋತಿ” ಯೋಜನೆಯಡಿ ಪ್ರಾಯೊಗಿಕವಾಗಿ ಮಾಲೂರು ತಾಲೂಕಿನಲ್ಲಿ ಗ್ರಾಮಗಳಿಗೆ ೨೪ ಗಂಟೆ ವಿದ್ಯುತ್ ಪೂರೈಕೆಗೆ ಪ್ರತ್ಯೇಕ ಫೀಡರ್ ಅಳವಡಿಕೆ.
ಸಮಾಜ ಕಲ್ಯಾಣ
* “ಬಾಗ್ಯಲಕ್ಷ್ಮಿ” ಯೋಜನೆಯ ಆರಂಭಿಕ ಠೇವಣಿ ದ್ವಿಗುಣ. ಆಂತಿಮ ಕೊಡುಗೆ ಮೊತ್ತ ರೂ.೧ ಲಕ್ಷಕ್ಕೆ ಏರಿಕೆ, ೧.೧೯ ಲಕ್ಷ ಹೆಣ್ಣುಮಕ್ಕಳಿಗೆ ರೂ.೧೧೯ ಕೋಟಿ ಮೊತ್ತದ ಬಾಂಡ್ ವಿತರಣೆ.
* “ಸಂಧ್ಯಾ ಸುರಕ್ಷಾ”ಯೋಜನೆಯಡಿ ೩.೫ ಲಕ್ಷಕು ಹೆಚ್ಚು ಹಿರಿಯ ನಾಗರಿಕರಿಗೆ ಮಾಸಾಶನ ವಿತರಣೆ.
* ವಿಶೇಷ ಘಟಕ ಯೋಜನೆಯಡಿ ರೂ.೫೪ ಕೋಟಿ ಮತ್ತು ಗಿರಿಜನ ಉಪಯೋಜನೆಗಳ ಅಡಿ ರೂ.೨೧ ಕೋಟಿ ಸೇರಿದಂತೆ ರೂ.೭೬ ಕೋಟಿ ಅನುದಾನ.
* ಅಲ್ಪಸಂಖ್ಯಾತರ ಶಿಕ್ಷಣಕ್ಕಾಗಿ ೨೫ ಹೊಸ ವಿದ್ಯಾರ್ಥಿ ನಿಲಯಗಳಿಗೆ ಮಂಜೂರಾತಿ. ಹೊಸದಾಗಿ ೮ ವಿದ್ಯಾರ್ಥಿನಿಲಯಗಳ ಪ್ರರಂಭ.
* “ಜನಸ್ಫದನ” ಕಾರ್ಯಕ್ರಮದಡಿ ಒಟ್ಟು ೫.೨೪ ಲಕ್ಷ ಅರ್ಜಿ ಸ್ವೀಕಾರ. ೩.೪೭ ಲಕ್ಷ ಅರ್ಜಿ ವಿಲೇವಾರಿ. ಶೇ.೬೫ ರ ಗುರಿಸಾಧನೆ.


