Home > ಅಂಕಿ ಅಂಶಗಳು

ನೆರೆಪ್ರದೇಶ – ರವಾನೆಯಾದ ಸಾಮಾಗ್ರಿಗಳ ವಿವರ

ನೆರೆ ಪ್ರದೇಶ - ರವಾನೆಯಾದ ಸಾಮಾಗ್ರಿಗಳ ವಿವರ

ನೆರೆ ಪ್ರದೇಶ - ರವಾನೆಯಾದ ಸಾಮಾಗ್ರಿಗಳ ವಿವರ


ನೆರೆ ಪ್ರದೇಶ – ನೋಡಲ್ ಅಧಿಕಾರಿಗಳ ಪಟ್ಟಿ

ಬೆಳಗಾವಿ

ಬಿಜಾಪುರ

ಗದಗ


ಭಾರತೀಯ ಜನತಾ ಪಾರ್ಟಿಯ ೨೦೦೯ ಲೋಕಸಭಾ ಚುನಾವಣಾ ಪೂರಕ ಪ್ರಣಾಳಿಕೆ ಅಂಶಗಳು:-

ಭಾರತೀಯ ಜನತಾ ಪಾರ್ಟಿಯ ೨೦೦೯ ಲೋಕಸಭಾ ಚುನಾವಣಾ ಪೂರಕ ಪ್ರಣಾಳಿಕೆ ಅಂಶಗಳು:-
ರಾಜ್ಯದ ಎಲ್ಲಾ ನಾಗರೀಕರಿಗೆ ಗುರುತಿನ ಚೀಟಿಯ ವಿತರಣೆ
ರಾಜ್ಯದ ಜನತೆಗೆ ಸತತವಾಗಿ ಒಳ್ಳೆಯ ಗುಣಮಟ್ಟದ ಕುಡಿಯುವ ನೀರಿನ ಸರಬರಾಜಿಗೆ  ಸೂಕ್ತ ಯೋಜನೆ.


ಬಿಜೆಪಿ ಪ್ರಣಾಳಿಕೆ ೨೦೦೯

ಭಾರತೀಯ ಜನತಾ ಪಕ್ಷ

ಉತ್ತಮ ಆಡಳಿತ           ಅಭಿವೃದ್ಧಿ                 ರಕ್ಷಣೆ

ಚುನಾವಣಾ ಪ್ರಣಾಳಿಕೆ

ಲೋಕಸಭಾ ಚುನಾವಣೆ 2009

ಬಿಜೆಪಿ ಚುನಾವಣಾ ಪ್ರಣಾಳಿಕೆ (ಡೌನ್-ಲೋಡ್-ಪಿಡಿಎಫ್)


ಶ್ರೀ ಬಿ.ಎಸ್.ಯಡಿಯೂರಪ್ಪನವರು ತುಳಿದ ಹಾದಿ ಅದ್ಹೇಗೆ ತಪ್ಪಾಗಲು ಸಾಧ್ಯ?


ಇನ್ನೂರ ಇಪ್ಪತ್ನಾಲ್ಕು ಸದಸ್ಯರ ವಿಧಾಸಭೆಯಲ್ಲಿ ಬಹುಮತಕ್ಕೆ ೩ ಸಂಖ್ಯೆ ಕಡಿಮೆ ಬಿದ್ದ ಕಾರಣ ಬೆಂಬಲ ಕಲೆಹಾಕುವ ಸಲುವಾಗಿ ಜನಾದೇಶವನ್ನು ಬಲಗೊಳಿಸುವ ಹಾಗೂ ಬಹುಮುಖ್ಯವಾದ ರಾಜಕೀಯ ಸ್ಥಿರತೆಯ ಸಲುವಾಗಿ ಇತರ ಪಕ್ಷಗಳ ಶಾಸಕರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳಬೇಕಾಗಿ ಬಂತು.

ಈ ಎಲ್ಲಾ ಬೆಳವಣಿಗೆಗಳನ್ನು ಪಕ್ಷಾಂತರ ನಿಷೇಧ ಕಾಯಿದೆ ಹಾಗೂ ದೇಶದಲ್ಲಿ ಬದಲಾಗುತ್ತಿರುವ ರಾಜಕೀಯ ಕ್ಷಿತಿಜದ ಹಿನ್ನೆಲೆಯನ್ನು ಪರಾಮರ್ಶಿಸಬೇಕಾಗಿ ಬಂದಿದೆ. ಪಕ್ಷಾಂತರವನ್ನು ಮೊಟ್ಟ ಮೊದಲ ಬಾರಿಗೆ ತಡೆಯಲು ಯತ್ನಿಸಿದ್ದು ಪ್ರಧಾನಿ ರಾಜೀವ ಗಾಂಧಿಯವರ ಸರ್ಕಾರ. ೧೯೮೫ರಲ್ಲಿ ಪಕ್ಷಾಂತರ ನಿಷೇಧ ಕಾಯಿದೆಯನ್ನು ಜಾರಿಗೆ ತಂದ ರಾಜೀವ ಗಾಂಧಿ ಸರ್ಕಾರ, ಆ ಕಾಯಿದೆಯನ್ನು ಸಂವಿಧಾನದ ೧೦ನೇ ಶೆಡ್ಯೂಲ್‌ಗೆ ಸೇರಿಸಿತು. ಬಿಡಿ ಶಾಸಕರು ಪಕ್ಷಾಂತರಗೊಳ್ಳುವುದಕ್ಕೆ ನಿಷೇಧ ಹೇರಿದ ಕಾಯಿದೆ ಶಾಸಕರ ಸಗಟು ಮಾರಾಟಕ್ಕೆ ಕಾನೂನಿನ ಮುದ್ರೆಯೊತ್ತಿತ್ತು. ಇಂತಹ ಲೋಪ ಹಾಗೂ ಅದರ ಬಗ್ಗೆ ವ್ಯಕ್ತವಾದ ಟೀಕೆಗಳ ಹಿನ್ನೆಲೆಯಲ್ಲಿ ೨೦೦೩ರಲ್ಲಿ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ಸಂವಿಧಾನದ ೯೧ನೇ ತಿದ್ದುಪಡಿ ಮೂಲಕ ಕಾಯಿದೆಗೆ ಮಾರ್ಪಾಡು ಮಾಡಲು ಮುಂದಾಯಿತು. ಈ ತಿದ್ದುಪಡಿ ಪಕ್ಷ ಒಡೆಯುವ ಅವಕಾಶಕ್ಕೆ ಕಡಿವಾಣ ಹಾಕಿ ಶಾಸಕರು ಪಕ್ಷಾಂತರಗೊಳ್ಳುವುದಕ್ಕೆ ಸಂಪೂರ್ಣ ತಡೆಯೊಡ್ಡಿತು. ಈ ಮಧ್ಯೆ ವೀರಪ್ಪ ಮೊಯ್ಲಿ ನೇತೃತ್ವದ ಎರಡನೇ ಆಡಳಿತಾತ್ಮಕ ಸುಧಾರಣಾ ಆಯೋಗ ಸಂವಿಧಾನದ ೯೧ನೇ ತಿದ್ದುಪಡಿಯನ್ನು ಸ್ವಾಗತಿಸಿತು. ಅಲ್ಲದೆ ಬಿಡಿ ಇಲ್ಲವೆ ಗುಂಪಾಗಿ ಪಕ್ಷ ಬದಲಿಸಲು ಬಯಸುವ ಶಾಸಕರು ತಮ್ಮ ಸ್ಥಾನಕ್ಕೆ ಮೊದಲು ರಾಜೀನಾಮೆ ನೀಡಬೇಕು ಹಾಗೂ ಹೊಸದಾಗಿ ಜನಾದೇಶವನ್ನು ಪಡೆದುಕೊಳ್ಳಬೇಕು. ಇಂತಹ ಕ್ರಮ ತಮ್ಮ ಹೊಲಸು ರಾಜಕೀಯ ವ್ಯವಸ್ಥೆಯನ್ನು ಸ್ವಚ್ಛಗೊಳಿಸುವ ನಿಟ್ಟಿನಲ್ಲಿ ಒಂದು ಗಮನಾರ್ಹ ಬೆಳವಣಿಗೆ ಎಂಬ ಅಭಿಪ್ರಾಯ ಕೇಳಿಬಂದಿತು. ಪಕ್ಷವನ್ನು ವಿಭಜಿಸಲು ಹಾಗೂ ಸಾಮೂಹಿಕವಾಗಿ ಪಕ್ಷಾಂತರಗೊಳ್ಳಲು ಅವಕಾಶ ಮಾಡಿಕೊಟ್ಟಿದ್ದು ಹಿಂದಿನ ಕಾಯಿದೆ ಅವಕಾಶವಾದಿ ರಾಜಕೀಯ ಹಾಗೂ ಪಕ್ಷ ಒಡೆಯುವ ಬೆಳವಣಿಗೆಗಳಿಗೆ ಕಾರಣವಾಗಿತ್ತು. ಆದರೆ, ೯೧ನೇ ತಿದ್ದುಪಡಿ ಇಂತಹ ಬೆಳವಣಿಗೆಗಳಿಗೆ ಕಡಿವಾಣ ಹಾಕಿತು ಎಂಬ ಅಭಿಪ್ರಾಯ ಕೇಳಿಬಂತು. ಇತ್ತ ಸಂವಿಧಾನ ಪರಾಮರ್ಶೆಗಾಗಿ ನೇಮಕಗೊಂಡಿದ್ದ ಸಮಿತಿ ಮಾಡಿದ ಶಿಫಾರಸ್ಸಿನ ಹಿನ್ನಲೆಯಲ್ಲಿ ೯೧ನೇ ತಿದ್ದುಪಡಿಯನ್ನು ಜಾರಿಗೆ ತರಲಾಗಿತ್ತು. ಸಂವಿಧಾನದ ೧೦ನೇ ಶೆಡ್ಯೂಲ್‌ಗೆ ಸೂಕ್ತ ಮಾರ್ಪಾಡು ಮಾಡುವ ಮೂಲಕ ೯೧ನೇ ತಿದ್ದುಪಡಿಯನ್ನು ಅದರಲ್ಲಿ ಸೇರಿಸಬೇಕು ಎಂದು ಸಮಿತಿ ಸೂಚಿಸಿತ್ತು. ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶ ಎಂ.ಎನ್.ವೆಂಕಟಾಚಲಯ್ಯ ನೇತೃತ್ವದ ಈ ಸಂವಿಧಾನ ಪರಾಮರ್ಶೆ ಸಮಿತಿ ‘ಸಚಿವರ ಸಂಖ್ಯೆ’ಗೂ ಕಡಿವಾಣ ಹಾಕಬೇಕು ಎಂದು ಸೂಚನೆ ನೀಡಿತು. ಈ ಎಲ್ಲ ಅಂಶಗಳನ್ನು ೯೧ನೇ ತಿದ್ದುಪಡಿ ಮೂಲಕ ಜಾರಿಗೆ ತರಲಾಯಿತು.


ಭಯೋತ್ಪಾದನೆ


  • ಭಾರತ ವಿಭಜನೆಯಾದ ನಂತರ ಗೃಹಮಂತ್ರಿ ಪಟ್ಟವನ್ನು ಅಲಂಕರಿಸುತ್ತ ಬಂದವರೆಲ್ಲರೂ, ನಾವು ಉಗ್ರರ ದಾಳಿ ಸಹಿಸುವುದಿಲ್ಲ , ಅವರಿಗೆ ಸರಿಯಾದ ಪಾಠ ಕಲಿಸುತ್ತೇವೆ ಎಂದು ಪೊಳ್ಳು ಮಾತು ಆಡುತ್ತಲೇ ಬಂದರು. ಆದರೆ ಉಗ್ರರು ಪಾಕ್ ಮೌನ ಸಮ್ಮತಿಯಿಂದಲೋ ಅಥವಾ ಕುಮ್ಮಕ್ಕಿನಿಂದಲೋ ಭಾರತಕ್ಕೆ ನುಸುಳಿ ಮುಗ್ಧರ ಜೀವಹಾನಿ ಮಾಡುತ್ತಲೇ ಇದ್ದಾರೆ. ರಾಷ್ಟ್ರಪತಿ ಸಹಿತ ಎಲ್ಲ ನಾಯಕರೂ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುತ್ತಿರುವುದಾಗಿಯೂ, ಎಲ್ಲರೂ ಶಾಂತಿಯಿಂದಿರಬೇಕೆಂದು ಮನವಿ ಮಾಡುವುದು ಮಾಮೂಲಾಗಿ ಹೋಗಿದೆ. ಈ ಘಟನೆಯು ನೆನಪಿನಿಂದ ಜಾರುವುದರೊಳಗೆ ಮತ್ತೆಲ್ಲೊ , ಇನ್ಯಾವುದೊ ರೂಪದಲ್ಲಿ ಭಯೋತ್ಪಾದನೆ ಮತ್ತೆ ಪುನರಾವರ್ತನೆಯಾಗುತ್ತದೆ. ಮತ್ತೆ ಸರ್ಕಾರಿ ಮುಖ್ಯಸ್ಥರ ಅದೇ ರಾಗ ಕೇಳುತ್ತದೆ. ಜೀವತೆತ್ತವರ ಕುಟುಂಬದವರಿಗೆ ಒಂದಷ್ಟು ಪರಿಹಾರ ಧನ, ಪ್ರಶಸ್ತಿ ಪ್ರಧಾನ. ಹೀಗೇ ನಡೆದಿದೆ. ಇಲ್ಲಿನ ಅಲ್ಪ ಸಂಖ್ಯಾತರನ್ನು ಮತ ಗಳಿಕೆಗಾಗಿ ಸಂತುಷ್ಟಗೊಳಿಸಲೋ ಏನೋ ಪಾಕಿಸ್ತಾನ, ಹಿಂದೂಸ್ತಾನದ ನಡುವೆ ಸ್ನೇಹಸೇತುವೊಂದನ್ನು ಕಟ್ಟುವ ನಾಟಕವೂ ನಡೆಯುತ್ತಲೇ ಇದೆ. ಪಾಕಿಸ್ತಾನೀಯರು, ಬಾಂಗ್ಲಾ ದೇಶೀಯರು ಸಲೀಸಾಗಿ ಭಾರತಕ್ಕೆ ಬರಲು ರಸ್ತೆ, ರೈಲು ಮಾರ್ಗಗಳು, ವ್ಯಾಪಾರ ವಹಿವಾಟು ಮಾಡುವ ಕೆಲಸಗಳು ನಡೆದಿವೆ. ಇದನ್ನೇ ನೆಪ ಮಾಡಿಕೊಂಡು ಇಲ್ಲಿಗೆ ಬಂದು ಅಕ್ರಮವಾಗಿ ನೆಲೆಯೂರಿ, ಸ್ವದೇಶಕ್ಕೆ ಹಿಂದಿರುಗದೆ ಇರುವ ಇಂಥ ಅಕ್ರಮ ವಲಸೆಕೋರರು, ರಾಷ್ಟ್ರ ದ್ರೋಹಿಗಳು ಮತ್ತು ಭಯೋತ್ಪಾದಕರ ಸಂಖ್ಯೆ ದಿನೇ ದಿನೇ ಜಾಸ್ತಿಯಾಗುತ್ತಿದೆ.

ವಿದ್ಯುತ್ ಕೊರತೆಗೆ ಕಾಂಗ್ರೆಸ್ ಹಾಗೂ ಜೆಡಿ‌ಎಸ್ ಹೊಣೆ


ನಮ್ಮ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅನಿರೀಕ್ಷಿತವಾಗಿ ರಾಜ್ಯದ ಮೇಲೆರಗಿಬಂದ ಕರಿಮೋಡಗಳಲ್ಲಿ ವಿದ್ಯುತ್ ಸಂಕಷ್ಟವೂ ಒಂದು. ಕೇಂದ್ರದ ವಿದ್ಯುತ್ ಸ್ಥಾವರಗಳಿಂದ ಪೊರೈಕೆ ಆಗುತ್ತಿದ್ದ ವಿದ್ಯುತ್ ಪೂರೈಕೆ ದಿಢೀರ್ ಕುಸಿಯಿತು. ಇದಕ್ಕೆ ಕಲ್ಲಿದ್ದಲು ಕೊರತೆ ಕಾರಣ ಎಂದು ಕೇಂದ್ರ ಸರ್ಕಾರ ಹೇಳಿತು. ಆದರೆ ವಾಸ್ತವವೇ ಬೇರೆ.

ನಮ್ಮ ರಾಜ್ಯದಲ್ಲಿ ಈ ಸಾಲಿನಲ್ಲಿ ಸೂಪಾ, ಲಿಂಗನಮಕ್ಕಿ, ಮಾಣಿ ಸೇರಿದಂತೆ ಎಲ್ಲಾ ವಿದ್ಯುತ್ ಉತ್ಪಾದನಾ ಜಲಾಶಯಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ನೀರು ಸಂಗ್ರಹ ಆಗಲಿಲ್ಲ. ಬಳ್ಳಾರಿ ಥರ್ಮಲ್ ಘಟಕದಲ್ಲಿ ಪೂರ್ಣ ಪ್ರಮಾಣದಲ್ಲಿ (೫೦೦ ಮೆಗಾವ್ಯಾಟ್) ವಿದ್ಯುತ್ ಉತ್ಪಾದನೆ ಆಗುತ್ತಿಲ್ಲ.

ರಾಜ್ಯವು ಹೆಚ್ಚಾಗಿ ಜಲವಿದ್ಯುತ್ ಉತ್ಪಾದನೆಯನ್ನೇ ಅವಲಂಬಿಸಿದೆ. ೨೦೦೩-೦೪ರಿಂದ ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆಯಲ್ಲಿ ಯಾವುದೇ ಹೆಚ್ಚಳ ಆಗಿಲ. ಆದರೆ ವಿದ್ಯುತ್ ಬೇಡಿಕೆಯಲ್ಲಿ ಮಾತ್ರ ಪ್ರತಿ ವರ್ಷ ಶೇ. ೧೨ರಷ್ಟು ಹೆಚ್ಚಳ ಕಾಣುತ್ತಿದೆ.

ಸದ್ಯ ರಾಜ್ಯದಲ್ಲಿ ಬೆಳಿಗ್ಗೆ ಮತ್ತು ಸಂಜೆ ವಿದ್ಯುತ್ ಬೇಡಿಕೆ ೮,೨೦೦ ಮೆಗಾವ್ಯಾಟ್ ಇದ್ದು ವಿದ್ಯುತ್ತಿನ ಲಭ್ಯತೆ ಕೇವಲ ೫೪೦೦ ಮೆಗಾವ್ಯಾಟ್ ಇದೆ. ಅಂದರೆ ಒಟ್ಟು ಕೊರತೆ ೨೮೦೦ ಮೆಗಾವ್ಯಾಟ್.

ಈ ವರ್ಷ ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆಯ ಪ್ರಮಾಣವು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ. ೩೦ರಷ್ಟು ಕಡಿಮೆ ಆಗಿದೆ. ಇದನ್ನು ಮನಗಂಡು ಮುಂದಿನ ಮಳೆಗಾಲದವರೆಗೆ ನಿರಂತರವಾಗಿ ಪೂರೈಕೆ ಮಾಡುವ ದಿಕ್ಕಿನಲ್ಲಿ ಕೂಲಂಕಷವಾಗಿ ಚಿಂತನೆ ನಡೆಸಿ ಕೆಲವು ದೀರ್ಘಾವಧಿ ಹಾಗೂ ಇನ್ನೂ ಕೆಲವು ತುರ್ತು ಕ್ರಮಗಳನ್ನು ಕೈಗೊಳ್ಳಲಾಗಿದೆ.


ಕಬ್ಬು ಬೆಳೆ: ಸರಕಾರದ ಬಿಗಿ ನಿಲುವು

ರಾಜ್ಯ ಸರ್ಕಾರ ನಿಗದಿ ಮಾಡಿರುವ ದರವನ್ನು ನೀಡಲು ಅನೇಕ ಕಾರ್ಖಾನೆಗಳು ಹಿಂದೇಟು ಹಾಕುತ್ತಿರುವ ಕಾರಣ ರಾಜ್ಯ ಸರ್ಕಾರ ’ಬಿಗಿನಿಲುವು’ ಕೈಗೊಳ್ಳಲು ತೀರ್ಮಾಸಿದೆ. ರಾಜ್ಯ ಸರ್ಕಾರ ಹಳೇ ಮೈಸೂರು ಭಾಗದ ಕಬ್ಬಿಗೆ ಪ್ರತಿ ಟನ್‌ಗೆ ೧೧೦೦ ರೂ, ಗಳು ಮತ್ತು ಉತ್ತರ ಕರ್ನಾಟಕದಲ್ಲಿನ ಕಾರ್ಖಾನೆಗಳಿಗೆ ಪ್ರತಿ ಟನ್‌ಗೆ ೧೨೦೦ ರೂ. ಗಳನ್ನು ನಿಗದಿ ಮಾಡಿದೆ. ರಾಜ್ಯ ಸರ್ಕಾರ ನಿಗದಿ ಮಾಡಿರುವ ಈ ದರವನ್ನು ನೀಡದಿದ್ದರೆ ಕಬ್ಬು ಅರೆಯಲು ಆದೇಶವನ್ನೇ ನೀಡಬಾರದೆಂಬ ಬಿಗಿ ನಿಲುವು ಕೈಗೊಳ್ಳುವ ಮೂಲಕ ಕಾರ್ಖಾನೆ ಮಾಲೀಕರನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಸರ್ಕಾರ ನಿರ್ಧರಿಸಿದೆ.

ಕೇಂದ್ರ ಸರ್ಕಾರ ಪ್ರತಿ ಟನ್‌ಗೆ ಕಳೆದ ವರ್ಷ ನಿಗದಿ ಮಾಡಿದ್ದ ೮೧೧ ರೂ. ಗಳನ್ನೇ ಈ ವರ್ಷವೂ ಮುಂದುವರೆಸಿದೆ. ಇದರ ಜತೆಗೆ ಕಬ್ಬು ಕಟಾಯಿಸಲು ಪ್ರತಿ ಟನ್‌ಗೆ ೬೦ ರೂ.ಗಳು ಹೆಚ್ಚುವರಿಯಾಗಿ ನೀಡಬೇಕೆಂದು ಹೇಳಿದೆ. ಆದರೆ ಕಾರ್ಖಾನೆಗಳು ೬೦ ರೂ.ಗಳನ್ನು ನೀಡುವ ಯಾವುದೇ ಸಾಧ್ಯತೆಗಳಿಲ್ಲ. ಕೇಂದ್ರ ಸರ್ಕಾರದ ದರ ಏನೇ ಇದ್ದರೂ ಸಹ ರಾಜ್ಯ ಸರ್ಕಾರ ತನಗಿರುವ ಪರಮಾಧಿಕಾರವನ್ನು ಬಳಸಿಕೊಂಡು ೧೧೦೦ ಮತ್ತು ೧೨೦೦ ರೂ ಗಳ ದರ ನಿಗದಿ ಮಾಡಿದೆ.

ರಾಜ್ಯದ ಕಬ್ಬು ಬೆಳೆಗಾರರು ೧೫೦೦ ರೂ. ಗಳಿಗೂ ಹೆಚ್ಚಿನ ಮೊತ್ತದ ದರ ನಿಗದಿ ಮಾಡಬೇಕು ಬೆಲೆ ಏರಿಕೆಯ ಪರಿಣಾಮ ರೈತರು ಸಾಕಷ್ಟು ತತ್ತರಿಸಿ ಹೋಗಿರುವ ಕಾರಣ ಹೆಚ್ಚಿನ ಬೆಲೆ ನೀಡಲೇಬೇಕೆಂಬ ಬೇಡಿಕೆ ಕಬ್ಬು ಬೆಳೆಗಾರರದ್ದಾಗಿದೆ. ಆದರೆ ರಾಜ್ಯದ ಸಕ್ಕರೆ ಕಾರ್ಖಾನೆಗಳ ಮಾಲೀಕರು ಮಾತ್ರ ಯಾವುದೇ ಕಾರಣಕ್ಕೂ ಇಷ್ಟು ಬೆಲೆ ನೀಡಲು ಸಾಧ್ಯವೇ ಇಲ್ಲವೆಂದು ಈಗಾಗಲೇ ಸರ್ಕಾರಕ್ಕೆ ತಮ್ಮ ಸಂದೇಶವನ್ನು ರವಾನಿಸಿದ್ದಾರೆ.

ಕಳೆದ ವರ್ಷ ಕಬ್ಬಿಗೆ ಪ್ರತಿ ಟನ್‌ಗೆ ೧೬೦ ರೂ.ಗಳ ಪ್ರೋತ್ಸಾಹ ಧನ ನೀಡಬೇಕೆಂದು ರಾಜ್ಯಪಾಲರ ಆಡಳಿತದಲ್ಲಿ ಆಗಿದ್ದ ತೀರ್ಮಾನ ಈಗ ಜಾರಿಯಾಗುತ್ತದೆ. ಬಹುತೇಕ ಎಲ್ಲಾ ಕಾರ್ಖಾನೆಗಳು ಈ ಮೊತ್ತವನ್ನು ಭರಿಸಿವೆ. ಇದಕ್ಕೆ ಪ್ರತಿಯಾಗಿ ಸರ್ಕಾರ ೬೦ ರೂ.ಗಳ ಖರೀದಿ ತೆರಿಗೆಯನ್ನು ಮೂರು ವರ್ಷಗಳ ನಂತರ ವಸೂಲಿ ಮಾಡಲು ಸರ್ಕಾರ ಸಮ್ಮತಿ ಸೂಚಿಸಿದೆ. ಒಟ್ಟಾರೆ ರೈತರಿಗೆ ಹಣ ತಲುಪಿದೆ ಎಂಬುದು ಸರ್ಕಾರಕ್ಕೆ ಇರುವ ತೃಪ್ತಿಯಾಗಿದೆ.

*******************


ವರ್ಗಾವಣೆಯ ವಿವರ

೨೦೦೪ ಶ್ರೀ ಧರಂಸಿಂಗ್ ಅವಧಿಯಲ್ಲಿ ೨೪೧೬೯
೨೦೦೫ ಶ್ರೀ ಧರಂಸಿಂಗ್ ಅವಧಿಯಲ್ಲಿ ೩೪೧೬೦
೨೦೦೭ ಶ್ರೀ ಕುಮಾರಸ್ವಾಮಿ ಅವಧಿಯಲ್ಲಿ ೨೫೪೦೨
೨೦೦೬ ಶ್ರೀ ಕುಮಾರಸ್ವಾಮಿ ಅವಧಿಯಲ್ಲಿ ೪೪೪೦೨
೨೦೦೮
ರಾಜ್ಯಪಾಲರು ಹಾಗೂ ಯಡಿಯೂರಪ್ಪನವರ ಅವಧಿಯಲ್ಲಿ ೧೫೧೫೩
ಧರಂಸಿಂಗ್ ಧರಂಸಿಂಗ್ ಕುಮಾರಸ್ವಾಮಿ ಕುಮಾರಸ್ವಾಮಿ ರಾಜ್ಯಪಾಲರು ಹಾಗೂ ಯಡಿಯೂರಪ್ಪ
೨೦೦೪ ೨೦೦೫ ೨೦೦೬ ೨೦೦೭
೨೦೦೮
ಕಂದಾಯ ಇಲಾಖೆ
೧೭೫
೧೭೫ ೨೩೨೨
೫೨೧
೯೪೧
ಗ್ರಾಮೀಣಾಭಿವೃದ್ಧಿ
—–
—–
೧೪೧೯ ೧೧೫
೨೨೭
ಪ್ರಾಥಮಿಕ ಮತ್ತು ಪೌಢಶಿಕ್ಷಣ
—–
—–
೧೩೮೩೬ ೧೩೧೦೬
೮೦೬
ಒಳಾಡಳಿತ
—– ೯೦೮೯
೭೭೪೯
೪೮೧೬
೨೬೬೯
ಆರ್ಥಿಕ
—–
೪೨೫೪
೨೭೪೮ ೧೦೪೧
೧೦೯೫
ಜಲಸಂಪನ್ಮೂಲ
೧೦೨೦ ೧೦೭೫ ೧೩೦೦
೪೯೯ ೫೨
ಲೋಕೋಪಯೋಗಿ
೧೨೧೪ ೨೨೩೪
೧೭೫೪
೧೨೬೨
೧೦೦೬
ಸಮಾಜಕಲ್ಯಾಣ ೬೨
೩೨೭
೩೪೪
೩೬
ಆಹಾರ ಮತ್ತು ನಾಗರೀಕ ಸರಬರಾಜು
—–
—– ೫೩೬
೬೫
೯೮
ಸಾರಿಗೆ —– —–
೫೮೦
೧೫೭
೧೬೬

ಕಳೆದ ೬ ತಿಂಗಳಲ್ಲಿ ರಾಜ್ಯ ಬಿ.ಜೆ.ಪಿ. ಸರ್ಕಾರದ ಸಾಧನೆ

ಅಭಿವೃದ್ದಿಯೆ ಬಿಜೆಪಿ ಸರ್ಕಾರದ ಮಂತ್ರವಾಗಿದೆ. ಒಂದು ಸದೃಡ ಅಭಿವೃದ್ದಿಶೀಲ ಹಾಗೂ ಸಂಪದ್ಬರಿತ ರಾಜ್ಯವನ್ನು ಕಟ್ಟಲು ಬಿಜೆಪಿ ಸರ್ಕಾರ ಕಟಿಬದ್ದವಾಗಿದ್ದು ಅನೇಕ ದೂರ ದೃಷ್ಟಿಯ ಯೋಜನೆಯನ್ನು ಹಮ್ಮಿಕೋಂಡಿದೆ.

  • ಹತ್ತು ಅಶ್ವಶಕ್ತಿವರೆಗಿನ ನೀರಾವರಿ ಪಂಪ್ ಸೆಟ್‌ಗಳಿಗೆ ಉಚಿತ ವಿದ್ಯುತ್ ಪೂರೈಕೆ. ೧೭ ಲಕ್ಷ ರೈತರಿಗೆ ವರದಾನವಾಗಿರುವ ಈ ಯೋಜನೆಯು ಆಗಸ್ಟ್ ೧ರಿಂದಲೇ ಜಾರಿಗೆ ಬಂದಿದೆ.
  • ಹಳ್ಳಿಯಲ್ಲಿ ಹೈನುಗಾರಿಕೆಯಲ್ಲಿ ತೊಡಗಿರುವ ಮಹಿಳೆಯರಿಗೆ ಪ್ರತಿ ಲೀಟರ್ ಹಾಲಿಗೆ ೨ರೂ ಗಳಂತೆ ಸಹಾಯ ಧನ
  • ಪ್ರತಿ ಶತ ೩ರ ಬಡ್ಡಿದರದಲ್ಲಿ ೪ ಲಕ್ಷ ರೈತರು ನೇಕಾರರು ಹಾಗು ಮೀನುಗಾರರಿಗೆ ೧೦೩೫ ಕೋಟಿ ರೂ ಸಾಲ ವಿತರಣೆ
  • ತುಂಗಾ ಮೇಲ್ದಡೆ ಯೋಜನೆಗೆ ಅನುಮತಿ ನೀಡಿ ೩೩೮೮ ಕೋಟಿ ರೂಪಾಯಿ ಅನುದಾನ ನಿಗದಿ
  • ಭಾಗ್ಯಲಕ್ಷ್ಮಿ ಯೋಜನೆಯಡಿಯಲ್ಲಿ ಹೆಣ್ಣು ಮಗುವಿಗೆ ಸಿಗುವ ಅನುದಾನ ೧ ಲಕ್ಷ ರೂಪಾಯಿಗೆ ಏರಿಕೆ

Page 1 of 212»