ಏಕಾತ್ಮ ಮಾನವತಾವಾದವು ಬಿಜೆಪಿ ನಂಬಿರುವ ಮೂಲ ತತ್ವ. ಈ ಸಿದ್ಧಾಂತವನ್ನು ಮೊದಲು ಪ್ರಸ್ತತಪಡಿಸಿದವರು ಪಂಡಿತ ದೀನ ದಯಾಳ್ ಉಪಾಧ್ಯಾಯರು. ಎಪ್ರಿಲ್ 22-25, 1965ರಂದು ಮುಂಬಯಿಯಲ್ಲಿ ನೀಡಿದ ಉಪನ್ಯಾಸದಲ್ಲಿ ಇದನ್ನು ಮಂಡಿಸಿದರು.
ನಮ್ಮ ರಾಷ್ಟ್ರೀಯ ಅಸ್ತಿತ್ವವನ್ನು ಅರ್ಥೈಸಿಕೊಳ್ಳದಿದ್ದರೆ ಸ್ವಾಂತಂತ್ರ್ಯಕ್ಕೆ ಯಾವುದೇ ಅರ್ಥವಿರುವುದಿಲ್ಲ. ದೇಶದ ಸಮಸ್ಯೆಗಳಿಗೆ ಪರಿಹಾರಗಳು ಸಿಗಬೇಕಾದರೆ ಒಂದಾಗಿ ಚಿಂತಿಸುವ ಅಗತ್ಯವಿದೆ ಎಂಬುದು ಈ ಸಿದ್ಧಾಂತದ ತಿರುಳಾಗಿದೆ.
ಏಕಾತ್ಮ ಮಾನವತಾವಾದದ ಪೂರ್ಣಪಠವನ್ನು ಇಲ್ಲಿ ಓದಬಹುದು
ಸರ್ವೇ ಭವಂತು ಸುಖಿನಃ
ಸರ್ವೇ ಸಂತು ನಿರಾಮಯಾಃ
ಸರ್ವೇ ಭದ್ರಾಣಿ ಪಶ್ಯಂತು
ಮಾ ಕಶ್ಚಿತ್ ದುಃಖ ಭಾಗ್ ಭವೇತ್
ಓಂ ಶಾಂತಿಃ ಶಾಂತಿಃ ಶಾಂತಿಃ
ಎಲ್ಲರೂ ಸುಖಿಗಳಾಗಲಿ
ಏಲ್ಲರೂ ಆರೋಗ್ಯವಂತರಾಗಲಿ
ಎಲ್ಲರೂ ಒಳಿತನ್ನು ಕಾಣಲಿ
ಯಾರಿಗೂ ದುಖಃ ಅನಭವವಾಗದಿರಲಿ
ಎಲ್ಲೆಡೆಯೂ ಶಾಂತಿ ನೆಲೆಸಲಿ
ಬಿಜೆಪಿಯ ಸಿದ್ಧಾಂತ: ಹಿಂದುತ್ವ(ಸಾಂಸ್ಕೃತಿಕ ರಾಷ್ಟ್ರೀಯತೆ)
ಹಿಂದುತ್ವ ಅಥವಾ ಸಾಂಸ್ಕೃತಿಕ ರಾಷ್ಟ್ರೀಯತೆ ಬಿಜೆಯು ಭಾರತೀಯ ಜೀವನ ಪದ್ಧತಿಯನ್ನು ಪರಿಗಣಿಸಿರುವ ಬಗೆಯಾಗಿದೆ. ಹಿಂದುತ್ವ ಎಂಬುದು ಒಂದು ಮತವನ್ನು ಪ್ರತಿನಿಧಿಸುವುದಿಲ್ಲ, ಬದಲಾಗಿ ರಾಷ್ಟ್ರೀಯತೆಯನ್ನು ಎಂಬುವುದನ್ನು ಗಮನಿಸಬೇಕು. ಈ ಕೆಳಗಿನ ಪುಸ್ತಕಗಳು ಹಿಂದುತ್ವದ ವಿವರವಾದ ಒಳನೋಟವನ್ನು ನೀಡುತ್ತದೆ.
ಜಗಮೋಹನ್ ಅವರ “Hinduism and Hindutva: What the Supreme Court Says ?”
Hindutva: [...]