ಕುಮಾರ ಸ್ವಾಮಿಯ ಅನಗತ್ಯ ಆರೋಪ – ಹತಾಶೆಯ ಕ್ರಮ : ಬಿಜೆಪಿ
ರವಿವಾರ, ಅಕ್ತೂಬರ 5th, 2008ಬೆಂಗಳೂರು , ಅಕ್ಟೋಬರ್ ೪ : ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಅಧಿಕಾರ ನಷ್ಟದ ನಂತರ ಹತಾಶರಾಗಿದ್ದು ಭಾಷೆಯ ನಿಯಂತ್ರಣ ಕಳೆದುಕೊಂಡು ಮನಬಂದಂತೆ ಅನಗತ್ಯ ಹೇಳಿಕೆಗಳನ್ನು ಕೊಡುತ್ತಿದ್ದಾರೆ ಎಂದು ಮಂತ್ರಿಗಳಾದ ಶ್ರೀ ಆರ್. ಅಶೋಕ್ ಮತ್ತು ಶ್ರೀ ಕಟ್ಟಾ ಸುಬ್ರಹ್ಮಣ್ಯಮ್ ನಾಯ್ಡು ತನ್ನ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪನವರ ಬಗೆಗೆ ಆಡಿಕೊಳ್ಳುತ್ತಿರುವ ರೀತಿ ಮಾಜಿ ಮುಖ್ಯಮಂತ್ರಿಗಳ ವ್ಯಕ್ತಿತ್ವಕ್ಕೆ ತಕ್ಕುದಲ್ಲ ಎಂದು ಅಭಿಪ್ರಾಯ ಪಟ್ಟರು.
ಈಜಿಪುರದ ವಸತಿಸಂಕೀರ್ಣದ ಗುತ್ತಿಗೆಯ ಬಗೆಗಿನ ಆರೋಪ ಕೇಳಿಬಂದ ತಕ್ಷಣ ಮಾನ್ಯ ಮುಖ್ಯಮಂತ್ರಿಗಳು ತನಿಖೆಗೆ ಆದೇಶಿಸಿ ತನ್ನ [...]

