ಉಡುಪಿ : ಗ್ರಾಮೀಣಾಭಿವೃದ್ಧಿಗೆ ಬಿಜೆಪಿ ಪಕ್ಷವು ವಿಶೇಷ ಆದ್ಯತೆ ನೀಡುತ್ತಿದ್ದು, ರಾಜ್ಯದ ಬಿಜೆಪಿ ಸರ್ಕಾರ ಗ್ರಾಮೀಣ ಜನರ ಏಳಿಗೆಗಾಗಿ ಅಸಂಖ್ಯಾತ ಯೋಜನೆಗಳನ್ನು ಜಾರಿಗೆ ತಂದಿದೆ. ಇವೆಲ್ಲವುಗಳ ಸದುಪಯೋಗ ಗ್ರಾಮೀಣ ಜನರಿಗೆ ಸುಲಭವಾಗಿ ತಲುಪಬೇಕಾಗಿದೆ. ಇದಕ್ಕಾಗಿ ಮುಂಬರುವ ಜಿ.ಪಂ., ತಾ.ಪಂ. ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸುವಂತೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದ ಡಿ.ವಿ.ಸದಾನಂದ ಗೌಡ ಮತದಾರರನ್ನು ವಿನಂತಿಸಿದ್ದಾರೆ. ಅವರು ಬುಧವಾರ ಹಿರಿಯಡ್ಕ, ಉದ್ಯಾವರ ಕಾಪು ಮತ್ತು ಎಲ್ಲೂರು ಜಿಲ್ಲಾ ಪಂಚಾಯತ್ ಕ್ಷೇತ್ರಗಳ ವಿವಿಧ ಸ್ಥಳಗಳಲ್ಲಿ ಮತದಾರರನ್ನು ಭೇಟಿ [...]